SSF ಕರ್ನಾಟಕ

 • 1973 ಎಪ್ರಿಲ್ 29ರಂದು ಕೇರಳದ ಪಟ್ಟಿಕ್ಕಾಡ್ ಜಾಮಿಅ ನೂರಿಯಾದಲ್ಲಿ SSF ರಚನೆ ಯಾದ ಬಳಿಕ ಅಲ್ಲಿ ಕಲಿಯುತ್ತಿದ್ದ ಕನ್ನಡಿಗ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರಿದರು.
 • 1973 ಎಪ್ರಿಲ್ 29ರಂದು ಕೇರಳದ ಪಟ್ಟಿಕ್ಕಾಡ್ ಜಾಮಿಅ ನೂರಿಯಾದಲ್ಲಿ SSF ರಚನೆ ಯಾದ ಬಳಿಕ ಅಲ್ಲಿ ಕಲಿಯುತ್ತಿದ್ದ ಕನ್ನಡಿಗ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರಿದರು.
 • ಕರ್ನಾಟಕದಲ್ಲೂ ಸಂಘಟನೆಯ ಕಾರ್ಯಾಚರಣೆ ವ್ಯಾಪಿಸಲು ಹಲವೆಡೆಗಳಲ್ಲಿ ಶಾಖಾ ಸಮಿತಿಗಳನ್ನು ರಚಿಸಿದರು. ಕಾಲೇಜು ವಿದ್ಯಾರ್ಥಿಗಳು ಇದಕ್ಕೆ ಪೆÇ್ರೀತ್ಸಾಹ ನೀಡಿದರು. ಉಲಮಾ ಉಮರಾಗಳೆಡೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಅವರೆಲ್ಲರೂ ಇದನ್ನು ಪುರಸ್ಕರಿಸಿದರು.
 • ಮುಂದೆ ತಾಲೂಕು, ಜಿಲ್ಲಾ ಸಮಿತಿ ಗಳು ರಚನೆಯಾಗತೊಡಗಿತು. ಆರಂಭದಲ್ಲಿ ಕೇರಳ ರಾಜ್ಯ ಸಮಿತಿಯ ತಳಹದಿಯಲ್ಲಿ ಕಾರ್ಯಾಚರಿಸುತ್ತಿದ್ದರೂ ಬಳಿಕ 1989 ಸೆಪ್ಟೆಂಬರ್ 19ರಂದು ಮಂಗಳೂರು ಪುರಭವನದಲ್ಲಿ ಸಮಾವೇಶ ನಡೆಸಿ ಪ್ರಥಮ ರಾಜ್ಯ ಸಮಿತಿಗೆ ರೂಪು ನೀಡಲಾಯಿತು.
 • ಕರ್ನಾಟಕ ರಾಜ್ಯದ ಮೊತ್ತ ಮೊದಲ ರಾಜ್ಯ ಸಮಿತಿ ಈ ರೀತಿಯಲ್ಲಿ

ಅಧ್ಯಕ್ಷರಾಗಿ ಎ.ಬಿ. ಹಸನುಲ್ ಫೈಝಿ, ಉಪಾಧ್ಯಕ್ಷರಾಗಿ ಎಂ.ಅಹ್ಮದ್ ಬಿನ್ ಸ್ವಾಲಿಹ್, ಯು.ಬಿ. ಇಸ್ಮಾಈಲ್ ಮದನಿ ಉಜಿರೆ, ಪ್ರ.ಕಾರ್ಯದರ್ಶಿಯಾಗಿ ಕೆ.ಪಿ.ಹುಸೈನ್ ಸಅದಿ, ಜೊ.ಕಾರ್ಯದರ್ಶಿಯಾಗಿ ಎ.ರಫೀಕ್ ಮದನಿ ಸಾಸ್ತಾನ, ಕೆ.ಪಿ.ಅಬ್ದುಲ್ ಲತೀಫ್ ಮಾಸ್ಟರ್, ಕೋಶಾಧಿಕಾರಿಯಾಗಿ ಕೆ.ಎಂ. ಹಸೈನಾರ್ ಫೈಝಿ, ಸದಸ್ಯರಾಗಿ ಜಿ.ಎಂ.ಅಬೂಬಕರ್ ಫೈಝಿ, ಎ.ಕೆ.ಅಬೂಬಕರ್ ಫೈಝಿ, ಬಿ.ಕೆ.ಅಬ್ದುಲ್ ಹಮೀದ್ ಫೈಝಿ, ಪಿ.ಎಸ್.ಅಬ್ದುಲ್ ವಹ್ಹಾಬ್ ಇವರನ್ನು ಆಯ್ಕೆ ಮಾಡಲಾಯಿತು.

 • ಒಂದು ವರ್ಷ 3ತಿಂಗಳು 6ದಿನ ಈ ರಾಜ್ಯ ಸಮಿತಿ ಆಡಳಿತ ನಡೆಸಿತು. ಇದೇ ಅವಧಿಯಲ್ಲಿ 1989 ಅಕ್ಟೋಬರ್ 21ರಂದು ಸಂಘಟನೆಯನ್ನು ನೋಂದಾಯಿಸಲಾಯಿತು. ನೋಂದಣಿ ನಂಬರ್ 146/89-90 ಆಗಿರುತ್ತದೆ.
 • ಮುಂದಿನ ಮಹಾಸಭೆ 1990 ಡಿಸೆಂಬರ್ 25 ರಂದು ಮಂಗಳೂರು ಬದ್ರಿಯಾ ಕಾಲೇಜು ಸಭಾಂಗಣದಲ್ಲಿ ನಡಸಲಾಯಿತು.
 • ರಾಜ್ಯದ ಪ್ರಥಮ ಶಾಖೆಯಾಗಿ ಪುತ್ತೂರು ತಾಲೂಕಿನ ಬನ್ನೂರು ಶಾಖೆಯಿಂದ ಬಂದ ಅರ್ಜಿಯನ್ನು ಪರಿಶೀಲಿಸಿ 1/91 ನಂಬ್ರದಲ್ಲಿ ಬನ್ನೂರು ಶಾಖೆಗೆ ನೋಂದಣಿ ನೀಡಲಾಯಿತು.
 • ಉತ್ಸಾಹೀ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಸಂಘಟನೆ ಕನ್ನಡ ಮಣ್ಣಿನಲ್ಲಿ ಬಲಿಷ್ಠಗೊಳ್ಳುತ್ತಿತ್ತು. ಪ್ರತೀ ಮೊಹಲ್ಲಾದ ಯುವಕರು ಉಲಮಾ ನೇತೃತ್ವದ ತಳಹದಿಯಲ್ಲಿ ಕಾರ್ಯಾಚರಣೆ ಮಾಡಲು ಮುಂದೆ ಬರುತ್ತಿದ್ದರು. ಪ್ರಸ್ತುತ ಸಂಧರ್ಭದಲ್ಲಾಗಿದೆ ಸಂಘನೆಯ ಅಸೂಯಾರ್ಹ ಬೆಳವಣಿಗೆಯನ್ನು ಕಂಡು ಬೆದರಿದ ಕೆಲವು ಮುಸ್ಲಿಂ ರಾಜಕೀಯ ಪಕ್ಷಗಳ ಷಢ್ಯಂತ್ರದಿಂದ ಕೇರಳದಲ್ಲಿ ಸಂಘಟನೆಯೊಳಗೆ ದೊಡ್ಡ ಬಿರುಕು ಉಂಟಾಯಿತು.
 • ಈ ಗ್ರೂಪಿಸಂ ಕರ್ನಾಟಕವನ್ನು ಹಬ್ಬಿದಾಗ ಯುವಕರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿತ್ತು. ಸಂಘಟನೆ ನಿರ್ಣಾಮವಾಗದಿದ್ದರೂ ಕಾರ್ಯಾಚರಣೆ ಕ್ಷೀಣಿಸಿತ್ತು. ಈ ಸಂಧರ್ಭವನ್ನು ತಮಗೆ ಪರವಾಗಿ ಉಪಯೋಗಿಸಲು ಬಿದಈಗಳು ವಿಫಲ ಪ್ರಯತ್ನ ನಡೆಸಿದರು. ಆದರೆ ಧೀರ್ಘದೃಷ್ಟಿಯುಳ್ಳ ನಮ್ಮ ಉಲಮಾಗಳ ದಣಿವರಿಯದ ಪರಿಶ್ರಮದಿಂದ ಬಿದಈಗಳ ಕನಸು ಸಫಲವಾಗಲಿಲ್ಲ.
 • ಈ ಸಂಧರ್ಭಗಳಲ್ಲಿ ಸುನ್ನೀ ಕಾರ್ಯಕರ್ತರು ಒಗ್ಗಟ್ಟಾದರು. SSF ಬೆಳೆಸುವ ಬಗ್ಗೆ ಚರ್ಚೆಗಳು ನಡೆಯಿತು. ಗ್ರೂಪಿಸಮ್ಮಿನ ವಾಗ್ವಾದವು ಹಸಿ ಹಸಿಯಾಗಿರುವಾಗ SSFನ ಹೆಸರಲ್ಲಿ ಸಂಘಟನೆ ಬೆಳೆಸುವುದು ಕಷ್ಟಸಾಧ್ಯವೆಂದರಿತಾಗ ಅಹ್ಲುಸ್ಸುನ್ನಃದ ಬೆಳವಣಿಗೆಗಾಗಿ ಕಾರ್ಯಾಚರಿಸಲು IPಅ (Isಟಚಿmiಛಿ Pಡಿoಣeಛಿಣioಟಿ ಅeಟಿಣಡಿe) ಎಂಬ ಹೊಸ ಸಮಿತಿಗೆ ರೂಪು ನೀಡಲಾಯಿತು. ಬಳಿಕ ಅದನ್ನು Isಟಚಿmiಛಿ Pಡಿoಠಿಚಿgಚಿಣioಟಿ ಅeಟಿಣಡಿe ಎಂದು ಮಾಡಲಾಯಿತು.
 • IPಅ ಯ ಮೊದಲ ಸಭೆ ದ.ಕ.ಜಿಲ್ಲೆಯ ಸುಳ್ಯದಲ್ಲೂ ಬಳಿಕ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯಲ್ಲೂ, ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪಿಂಟೋ ಕಾಂಪ್ಲೆಕ್ಸ್‍ನಲ್ಲೂ, ನಂತರ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲೂ ಕ್ರಮವಾಗಿ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಯನ್ನು ರಚಿಸಲಾಯಿತು.
 • ಇದರ ಕಾರ್ಯಾಚರಣೆ ಅಲ್ಪಾವಧಿಗೆ ಮಾತ್ರವಾಗಿತ್ತು. ಬಳಿಕ SSF ಮರು ಜೀವ ಪಡೆಯ ತೊಡಗಿತ್ತು. ನಾಯಕರು ಹಗಲಿರುಳು ಸಂಘಟನೆಯನ್ನು ಕಟ್ಟಲು ಪಣತೊಟ್ಟು ನಿಂತರು.
 • 1993 ಎಪ್ರಿಲ್ 17 ರಂದು ರಾಜ್ಯ ಸಮಿತಿಯ ಅಧಿಕಾರ ಜಿಲ್ಲಾ ಸಮಿತಿಗಳಿಗೆ ತಾತ್ಕಾಲಿಕವಾಗಿ ನೀಡಲಾಯಿತು. ಇದರಿಂದಾಗಿ SSF ರಾಜ್ಯ ಸಮಿತಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.
 • ಬಳಿಕ 1995 ಆಗಸ್ಟ್ 13 SSF ರಾಜ್ಯ ಸಮಿತಿಗೆ ಮರು ಜೀವ ನೀಡಲಾಯಿತು. ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ ಅಧ್ಯಕ್ಷರಾಗಿಯೂ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಪ್ರ.ಕಾರ್ಯದರ್ಶಿಯಾಗಿಯೂ 2 ವರ್ಷ 6 ತಿಂಗಳು 23 ದಿನಗಳು ನಡೆಸಿದ ಕಾರ್ಯಾಚರಣೆ ಕರ್ನಾಟಕದ ಸಂಘಟನಾ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿತ್ತು.
 • ಆರಂಭದಲ್ಲಿ ದ.ಕ. ಹಾಗೂ ಕೊಡಗು ಜಿಲ್ಲೆಗಳು ಮಾತ್ರವಿದ್ದರೂ ತಾಲೂಕು ಹಾಗೂ ಶಾಖೆಗಳನ್ನು ಪುನರ್ರಚನೆ ಮಾಡಿ ಬಲಿಷ್ಠಗೊಳಿಸುತ್ತಾ ನಾಯಕರ ನಿರಂತರವಾದ ಫೆÇೀನ್ ಕರೆಗಳು ಪ್ರ.ಕಾರ್ಯದರ್ಶಿಯ ಹೆಸರಲ್ಲಿ ಪ್ರತೀ ಕಾರ್ಯಕರ್ತರ ಮನೆಮನೆ ತಲುಪುತ್ತಿದ್ದ ಕಾರ್ಡ್‍ಗಳು ವಿವಿಧೆಡೆಗಳಲ್ಲಿ ನಡೆದ ಶಿಬಿರಗಳು, ನಿಶಾ ಕ್ಯಾಂಪ್‍ಗಳು ಹಲವಾರು ಸುನ್ನೀ ಕಾರ್ಯಕರ್ತರನ್ನು ಸಂಘಟನೆಯತ್ತ ಸೆಳೆಯಲು ಸಂಘಟನೆ ಬಲಿಷ್ಠಗೊಳ್ಳಲು ಕಾರಣವಾಯಿತು.

ಈ ಬಗ್ಗೆ ಧೀರ್ಘಕಾಲ ಸಂಘಟನೆಯ ಅಧ್ಯಕ್ಷರಾಗಿಯೂ, ಪ್ರ.ಕಾರ್ಯದರ್ಶಿಯಾಗಿಯೂ ಕಾರ್ಯಾಚರಿಸಿದ ಜಿ.ಎಂ.ಉಸ್ತಾದ್ ಹೇಳುತ್ತಾರೆ.

 • ಸಮಸ್ಯೆಗಳಿತ್ತು ಆದರೆ ಅದನ್ನು ಸಂತೋಷದಿಂದ ಸವಾಲಾಗಿ ತೆಗೆದುಕೊಂಡಿದ್ದೆವು.
 • ಶಿಬಿರಗಳು, ಕ್ಯಾಂಪ್‍ಗಳು ನಿರಂತರವಾಗಿ ನಡೆಯುತ್ತಿರಬೇಕು. ಕಾರ್ಯಕರ್ತರಿಗೆ ಅರಿವು ನೀಡಬೇಕು. ಕಾರ್ಯಕರ್ತರು ಸಕ್ರಿಯರಾಗುತ್ತಾರೆ.
 • 1985 ರ ವೇಳೆ ಪುತ್ತೂರಿನಲ್ಲಿ ನಡೆದ ದ್ವಿದಿನ ಕ್ಯಾಂಪ್ ನನಗೆ ಸಂಘಟನಾ ಕಾರ್ಯಾಚರಣೆಯ ಕಿಚ್ಚು ಹೊತ್ತುವಂತೆ ಮಾಡಿತ್ತು. ಆಗ ನಾನು ದರ್ಸಿನಲ್ಲಿದ್ದೆ...
 • 1995 ಮೇ 12,13 ನಾನಿದ್ದ ಸೂರಿಂಜೆಯಲ್ಲಿ ನಡೆದ ಅವಿಭಜಿತ ದ.ಕ.ಜಿಲ್ಲೆಯ 8 ತಾಲೂಕು ಕಾರ್ಯಕರ್ತರನ್ನು ಕಾರ್ಡ್ ಮೂಲಕ ಆಹ್ವಾನಿಸಿದ್ದೆವು. 200 ಕಾರ್ಯಕರ್ತರಿಗೆ 2 ದಿನಗಳ ಶಿಬಿರ ಆವೇಶವಾಗಿತ್ತು.
 • ವ್ಯಕ್ತಿ ಸಾಮೀಪ್ಯ ತುಂಬಾ ಅಗತ್ಯ. ಆದ್ದರಿಂದ ತುಂಬಾ ಬದಲಾವಣೆ ಮಾಡಬಹುದು.
 • ಒಬ್ಬನಿದ್ದರೂ ನಮ್ಮ ದಅïವಾ ನಡೆಸಬೇಕು. ನಾವೊಂದು ಕಡೆ ಹೋಗಿದ್ದಾಗ ಕೇವಲ ಒಬ್ಬರು ಮಾತ್ರ ಇದ್ದರು. ಆ ವ್ಯಕ್ತಿಯೊಂದಿಗೆ 2 ಗಂಟೆ ಕ್ಲಾಸ್ ತೆಗೆದೆವು. ಬಳಿಕ ಅದೇ ಊರಿಗೆ ಮತ್ತೊಮ್ಮೆ ತೆರಳಿ ಒಂದು ಮನೆಯಲ್ಲಿ ತರಗತಿ ನಡೆಸಿದೆವು. ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಹೊರಗೆ ಬಂದು ಅಗಲವಿರುವ ಮರದ ಎಲೆಗಳನ್ನು ತಂದು ಅದರಲ್ಲಿ ಕುಳ್ಳಿರಿಸಿ ತರಗತಿ ನಡೆಸಿದೆವು. ಇಂದು ಅಲ್ಲಿ ಅಲ್‍ಹಮ್ದುಲಿಲ್ಲಾಹ್... ಸಂಘಟನೆ ಬಲಿಷ್ಠಗೊಂಡಿದೆ. ಎ.ಪಿ.ಉಸ್ತಾದರ ಕರ್ನಾಟಕ ಯಾತ್ರೆಯ ವೇಳೆ ಎ.ಪಿ.ಉಸ್ತಾದ್ ಅಲ್ಲಿ ಇಳಿದಿದ್ದರು. ಇದು ವ್ಯಕ್ತಿ ಸಾಮೀಪ್ಯದ, ಪರಿಶ್ರಮದ ಫಲವಾಗಿದೆ.
 • ನಮ್ಮ ಕೆಲಸದೊಂದಿಗೆ ನಿಷ್ಠೆ ತೋರಿಸಬೇಕು ಜೊತೆಗೆ ಸಂಘಟನಾ ಕೆಲಸಗಳು ನಡೆಸಬೇಕು.
 • ಹಲವು ಕಡೆ ಕ್ಯಾಂಪಿಗೆ ಹೋಗಿ ಮರಳಿ ಸುಬ್‍ಹಿ ನಮಾಝಿಗೆ ತಲುಪಲು ರಾತ್ರೋರಾತ್ರಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋದದ್ದು ಮರೆಯಲು ಸಾಧ್ಯವಿಲ್ಲ.
 • ಕಷ್ಟಗಳನ್ನು ಖಿಚಿsಣe ಆಗಿ ತೆಗೆದರೆ ಆತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.
 • ಸಮಸ್ಯೆ ಬಂದಾಗ ಪರಿಹಾರದ ಪರವಾಗಬೇಕು ನಾವು. ಯಾವತ್ತೂ ನಾವು ಸಮಸ್ಯೆ ಅಡಿeಚಿಣ ಮಾಡುವವರು ಆಗಲೇಬಾರದು.
 • ಕೆಳಘಟಕಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸಿ ಮೇಲ್ಘಟಕಕ್ಕೆ ತಲುಪಿದವರು ಹಾಗೂ ನೇರವಾಗಿ ಮೇಲ್ಘಟಕಕ್ಕೆ ಆಯ್ಕೆಯಾದವರ ಮಧ್ಯೆ ತುಂಬಾ ವ್ಯತ್ಯಾಸವಿರುತ್ತದೆ. ಆದ್ದರಿಂದ ತಳಮಟ್ಟದಲ್ಲೇ ಕಾರ್ಯಾಚರಿಸಿ ಮೇಲೆ ಬರಬೇಕಾಗಿದೆ.
 • ಬಳಿಕ ಜೋಗ್‍ಫಾಲ್ಸ್ ಸಮೀಪದ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಗೆ ಚಾಲನೆ ನೀಡಲಾಯಿತು. ಬಳಿಕ ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂತು.

ದಶಮಾನೋತ್ಸವ

 • 1999 ಜನವರಿ 31ರಂದು ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ನ.ಮ) ರವರ ದರ್ಗಾದರ್ಬಾರಿನಿಂದ ಆರಂಭಿಸಿ ಸುಧೀರ್ಘವಾದ ಒಂದು ವರ್ಷಗಳ ಕಾಲ ಭರ್ಜರಿಯಾದ ಪ್ರಚಾರ ನಡೆಸಿ 1999 ಡಿಸೆಂಬರ್ 4,5,6 ಕುಂದಾಪುರದ ಗಾಂಧೀ ಮೈದಾನದಲ್ಲಿ ನಡೆದ ದಶಮಾನೋತ್ಸವ ಸಮ್ಮೇಳನ ಸಂಘಟನೆಯ ಚರಿತ್ರೆಯಲ್ಲಿ ಮರೆಯಲಸಾಧ್ಯ.
 • ಅಂದಿನ ರಾಜ್ಯಾಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಪ್ರ.ಕಾರ್ಯದರ್ಶಿ ಜಿ.ಎಂ.ಎಂ.ಕಾಮಿಲ್ ಸಖಾಫಿ ನೇತೃತ್ವದ ತಂಡದ ಅವಿರತ ಪರಿಶ್ರಮದ ಫಲವಾಗಿತ್ತದು.
 • 15ನೇ ವರ್ಷಾಚರಣೆಯ ಪ್ರಯುಕ್ತ ‘ಮಾನವತೆಗೆ ಮರಳೋಣ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಸಿದ ಕ್ಲಿಸ್ಟರ್ ಜ್ಯುಬಿಲಿ ಸಮ್ಮೇಳನ ವೈವಿಧ್ಯ ಕಾರ್ಯಕ್ರಮಗಳು ನಡೆದು ದ.ಕ.ಜಿಲ್ಲೆಯ ಬಜ್ಪೆಯಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತ್ತು.
 • ಬಳಿಕ ಕೇರಳದ ದರ್ಸ್-ದಅïವಾ ಕಾಲೇಜುಗಳಲ್ಲಿ ಕಲಿಯುತ್ತಿದ್ದ ಮುತಅಲ್ಲಿಂಗಳು ಬಿಡುವಿನ ವೇಳೆಗಳಲ್ಲಿ ಉತ್ತರ ಕರ್ನಾಟಕದ ಹಲವು ಹಳ್ಳಿ ಗಲ್ಲಿಗಳಿಗೆ ತೆರಳಿ ಸಂಘಟನೆಯನ್ನು ರಾಜ್ಯ ರಾಜ್ಯಾದ್ಯಂತ ಹಬ್ಬಿಸಲು ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ.
 • ಬಳಿಕ SSF ನ ಅಂಗಸಂಸ್ಥೆ IಊSಂಓ ಉತ್ತರದಲ್ಲಿ ಅದ್ಭುತ ಕ್ರಾಂತಿಯನ್ನು ಮಾಡಿತು. ಹಲವು ಜಿಲ್ಲೆಗಳ ಹಲವು ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ SSF ಮನೆಮಾತಾಯಿತು.
 • 25 ಕಾರ್ಯಕರ್ತರು ವರದಕ್ಷಿಣೆ ರಹಿತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಚಾಲನೆಯಾದ SSF ಸಿಲ್ವರ್ ಜ್ಯುಬಿಲಿ ಕಾರ್ಯಕ್ರಮಗಳು ಕೊನೆಗೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ನೇತೃತ್ವದಲ್ಲಿ ನಡೆದ ಕರ್ನಾಟಕ ಯಾತ್ರೆ ರಾಜ್ಯಾದ್ಯಂತ SSF ನ ನಿಜವಾದ ಶಕ್ತಿಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಯಿತು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದ ಅನೇಕ ಮಹನೀಯರಿಗೆ ಸಂಘಟನೆಯನ್ನು ಹತ್ತಿರದಿಂದ ತಿಳಿಯಲು ಸಾಧ್ಯವಾಯಿತು.
 • ಮೊದಲು ಹೂದೋಟ ಎಂಬ ಹೆಸರಲ್ಲಿ ಬರುತ್ತಿದ್ದ SSF ಮುಖವಾಣಿ ಈಗ ಇಶಾರ ಎಂಬ ಹೆಸರಲ್ಲಿ ಪಾಕ್ಷಿಕವಾಗಿ ಹೊರಬರುತ್ತಿದೆ. ಪತ್ರಿಕೋದ್ಯಮದಲ್ಲಿ ಸಹಜವಾದ ಅಡೆತಡೆಗಳಿದ್ದರೂ ಯಶಸ್ವಿಯಾಗಿ ಮುಂದುವರಿಸಲು ನಾಯಕತ್ವ ಪಣತೊಟ್ಟು ನಿಂತಿದೆ. ಕಾರ್ಯಕರ್ತರ ಸಹಕಾರವೂ ಅಗತ್ಯವಿದೆ.
 • ರೀಡ್ ಪ್ಲಸ್ ಹೊರತಂದ ಅಮೂಲ ಹಲವು ಗ್ರಂಥಗಳು ಸುನ್ನೀ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಅದನ್ನು ಮನೆ-ಮನಗಳಿಗೆ ತಲುಪಿಸಲು ಕಾರ್ಯಕರ್ತರು ತಯಾರಾಗಬೇಕಿದೆ.
 • SSF ಕರ್ನಾಟಕದಾದ್ಯಂತ ಮಾಡಿದ ಕ್ರಾಂತಿಯ ಮಹಾ ಚರಿತ್ರೆಯನ್ನು ಈ ಹೃಸ್ವ ಸಮಯದಲ್ಲಿ ವಿವರಿಸಿ ಮುಗಿಸಲು ಸಾಧ್ಯವಿಲ್ಲ. ಈ ಮಣ್ಣಿನಲ್ಲಿ ಸಂಘ ಶಕ್ತಿಗಾಗಿ ದುಡಿದ ಸರ್ವರಿಗೂ ಅಲ್ಲಾಹು ತಕ್ಕ ಪ್ರತಿಫಲ ಇಹ-ಪರ ಲೋಕದಲ್ಲಿ ನೀಡಲಿ. ನಮ್ಮನ್ನಗಲಿದ ಅನೇಕ ಮಿತ್ರರ ಖಬರ್ ಅಲ್ಲಾಹು ಸ್ವರ್ಗೋಧ್ಯಾನ ಮಾಡಲಿ. ಆಮೀನ್...
 • ಮುಂದಿನ ವರ್ಷ ಸಂಘಟನೆಗೆ 30 ವರ್ಷ ಪೂರ್ತಿಗೊಳ್ಳಲಿದೆ. ರಾಜ್ಯದ 30 ಜಿಲ್ಲೆಗಳಿಗೂ ಸಂಘಟನೆಯ ಕಂಪನ್ನು ಹರಡಿಸುವ ಮೂಲಕ ಅಹ್ಲುಸ್ಸುನ್ನಃದ ಕಾರ್ಯಾಚರಣೆಯನ್ನು ಇನ್ನಷ್ಟು ಸಕ್ರಿಯಗೊಳಿಸೋಣ. ಅಲ್ಲಾಹು ತೌಫೀಖ್ ನೀಡಲಿ. ಆಮೀನ್...