SSF Logo

Sunni Students Federation

Empowering Youth with Values

ರಚನೆ

SSF (ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್) 1973 ಎಪ್ರಿಲ್ 29ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಉಲಮಾ ನೇತೃತ್ವದ ತಳಹದಿಯಲ್ಲಿ ಅಸ್ತಿತ್ವಕ್ಕೆ ಬಂತು.

ಬಳಿಕ 1989 ಸೆಪ್ಟೆಂಬರ್ 19ರಂದು ಕರ್ನಾಟಕದಲ್ಲೂ ಎಸ್ಸೆಸ್ಸೆಫ್ ಅಧಿಕೃತವಾಗಿ ಚಾಲನೆಗೊಂಡಿತು.

ಉದ್ದೇಶ

ವಿದ್ಯಾರ್ಥಿ ಯುವಕರನ್ನು ಸಾಮಾಜಿಕ ಅನಿಷ್ಟ ಗಳಿಂದ ದೂರ ಸರಿಸಿ ಧಾರ್ಮಿಕ ಕಾಳಜಿಯುಳ್ಳ ನೈತಿಕ ಪ್ರಜ್ಞೆ ಇರುವ ಯುವಕರನ್ನಾಗಿ ಬೆಳೆಸುವುದು.

ದೇಶಪ್ರೇಮ, ಪರಧರ್ಮ ಸಹಿಷ್ಣುತೆ, ಸಾಂತ್ವನ, ಸಮಾಜಸೇವೆ ಹಾಗೂ ಕರ್ತವ್ಯ ನಿಷ್ಠೆಯುಳ್ಳ ಯುವಕರನ್ನು ನಾಡಿಗೆ ಸಮರ್ಪಿಸುವುದು.

ಸಾಧನೆ

ಸಂಘಟನೆಗೆ ಈಗ 53ವರ್ಷ. ಕೇರಳದ ಕುಗ್ರಾಮದಿಂದ ಆರಂಭವಾದ ಸಂಘಟನೆಯ ಕ್ಷಿಪ್ರ ಕಾರ್ಯಾಚರಣೆ ಈಗ ರಾಜ್ಯಗಳ ದೇಶಗಳ ಗಡಿದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಕಾರ್ಯಕರ್ತರಿರುವ ಯಶಸ್ವಿ ಸಂಘ ಶಕ್ತಿಯಾಗಿ ಬೆಳೆದಿದೆ.

ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಇರುವ ಬಹುತೇಕ ರಾಜ್ಯಗಳಲ್ಲಿ ಎಸ್ಸೆಸ್ಸೆಫ್ ಹೆಮ್ಮರವಾಗಿ ಬೆಳೆದು ನಿಂತಿದೆ. ರಾಷ್ಟ್ರದಾದ್ಯಂತ ಶಿಸ್ತು ಬದ್ಧ ಯುವ ಪಡೆಯನ್ನು ಸಮರ್ಪಿಸಲು ಸಂಘಟನೆಗೆ ಸಾಧ್ಯವಾಗಿದೆ. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಎಸ್ಸೆಸ್ಸೆಫ್ ಈಗಾಗಲೇ ವ್ಯಾಪಿಸಿದೆ.

1999 ಡಿಸೆಂಬರ್ 4,5 ತಾರೀಖುಗಳಲ್ಲಿ ನಡೆದ ಎಸ್ಸೆಸ್ಸೆಫ್ ದಶಮಾನೋತ್ಸವ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಕರ್ನಾಟಕ ಯಾತ್ರೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗೋಲ್ಡನ್ ಫಿಫ್ಟಿ ಸಮಾವೇಶ ಸಂಘಟನೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ವರ್ಷಂಪ್ರತಿ ನಡೆಯುತ್ತಿರುವ ಸಾಹಿತ್ಯೋತ್ಸವ, ಕ್ಯಾಂಪಸ್ ಮೀಟ್‌ಗಳು, ದಅವಾ ಸೆನ್ಸೋರಿಯಂ, ಆಧ್ಯಾತ್ಮಿಕ ಶಿಬಿರಗಳು, ಮಹ್‌ಳರತುಲ್, ಬದ್ರಿಯಾ, ತರ್ತೀಲ್, ಮೀಲಾದ್ ಕ್ಯಾಂಪೈನ್, ಬ್ಲಡ್ ಸೈಬೋ, ಆಝಾದಿ ಸಪ್ತಾಹ, ಸೌಹಾರ್ದ ಕೂಟಗಳು ಸಂಘಟನೆಯನ್ನು ನಾಡಿನ ಜನಮನಸ್ಸುಗಳಿಗೆ ತಲುಪಿಸಿದೆ.

ನಿಲುವು

ಪವಿತ್ರ ಇಸ್ಲಾಮಿನ ಪಾರಂಪರಿಕ ಅಹ್ಲುಸ್ಸುನ್ನಃದ ಆದರ್ಶದಲ್ಲಿ ಯಾವುದೇ ರಾಜಿ ಇಲ್ಲ. ನವೀನ ವಾದ, ಉಗ್ರವಾದ, ವಿತಂಡವಾದ, ಕೋಮುವಾದ, ನಕಲಿ ತ್ವರೀಖತ್‌ಗಳನ್ನು ಯಾವತ್ತೂ ಸಹಿಸಲ್ಲ. ರಾಜಕೀಯವಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿ ಕೊಳ್ಳುವುದಿಲ್ಲ. ಚುನಾವಣೆಯ ವೇಳೆ ನಾಡಿಗೆ, ಸಮುದಾಯಕ್ಕೆ, ಸಮಾಜಕ್ಕೆ ಉತ್ತಮ ಆಯ್ಕೆ ಯಾರೆಂದು ನೋಡಿ ಓಟು ನೀಡುವುದು.

ಸದಸ್ಯತ್ವ

9ವಯಸ್ಸಿಗಿಂತ ಮೇಲ್ಪಟ್ಟು 32ವಯಸ್ಸು ಮೀರದ ಅಹ್ಲುಸ್ಸುನ್ನಃದ ಆದರ್ಶದಲ್ಲಿ ಬದ್ಧವಾಗಿ ಬದುಕುವ ಯುವಕರಿಗೆ ಎರಡು ವರ್ಷಕ್ಕೊಮ್ಮೆ ನಡೆಯುವ ಸದಸ್ಯತ್ವ ಅಭಿಯಾನದ ವೇಳೆ ಸದಸ್ಯರಾಗಬಹುದು.

Formation

The Sunni Students Federation (SSF) was founded on April 29, 1973, in Malappuram, Kerala, under the visionary leadership of esteemed Ulama.

With its growing influence, SSF expanded to Karnataka and was officially launched there on September 19, 1989.

Vision & Objectives

SSF is dedicated to shaping a generation of responsible and value-driven youth. It strives to guide students away from harmful social influences while nurturing strong moral character and deep religious awareness.

The organization aims to contribute to the nation by empowering youth with patriotism, interfaith harmony, compassion, a spirit of service, and a strong sense of duty.

Journey & Achievements

Over 53 years, SSF has grown from a humble beginning in a small village in Kerala into a dynamic international movement with lakhs of committed members.

From Kashmir to Kanyakumari, SSF has established a strong presence across India, building a disciplined and socially responsible youth force. In Karnataka alone, the organization has expanded to more than 25 districts.

Key milestones include the grand Decennial Conference (December 4–5, 1999), the historic "Karnataka Yatra" of Indian Grand Mufti Sultanul Ulama AP Usthad, and the landmark Golden Fifty Conference held at Bangalore Palace Grounds.

SSF’s vibrant annual initiatives—such as Sahityotsav, Campus Conferences, Da’wah Sensorium, Tarteel Holy Quran Premio, Spiritual camps, Meelad Campaigns, Blood Donation Drives, Azadi Sapthaha, and harmony gatherings—continue to inspire and connect communities.

Principles & Stand

SSF stands firmly rooted in the authentic traditions of Ahlussunnah, with no compromise in its core values. It strongly opposes extremism, communalism, misleading ideologies, and pseudo-spiritual movements.

Politically independent, SSF encourages individuals to make thoughtful and responsible choices during elections, keeping the welfare of the nation and society in mind.

Membership

SSF welcomes young individuals aged between 9 and 32 who are committed to living by the principles of Ahlussunnah. Membership is offered through structured campaigns conducted once every two years.